ಉತ್ತರ ಧ್ರುವದಿಂ ದಕ್ಷಿಣ ಧ್ರುವಕು ಚುಂಬಕ ಗಾಳಿಯು ಬೀಸುತಿದೆ....ಅಂಬಿಕಾತನಯದತ್ತ

April 10, 2011

ಸಣ್ಣ ಸಣ್ಣ ಕುಶಿ ಸಾವಿರಾರು ......

Valley ಯ  ಮಾಲಿ ಗಾಳಿಯಪ್ಪ ನಾನು ಒಳಗೆ ಬರುತ್ತಲೇ ಓಡಿ ಬಂದ ."ಅಕ್ಕ ಏನೋ ತೋರಿಸ್ತುನಿ ಬನ್ನಿ "ಎನ್ನುತ್ತಾ ಕುಶಿ ಕುಶಿಯಾಗಿ ಹೆಜ್ಜೆ ಹಾಕಿದ. ಅವನ ಹಿಂದಿಂದೆ ಹೋದೆ .
 ಅಲ್ಲಿ ಹಕ್ಕಿಗಳ ಗದ್ದಲವೋ ಗದ್ದಲ." ಅಲ್ನೋಡಿ ಅಕ್ಕ"" ಅಂದ. ನನ್ನ ಮುಖದಲ್ಲಿ ಮೊರದಗಲದ  ನಗೆಯನ್ನು ಅಪೇಕ್ಶಿಸುತ್ತ.

 ಅದೊಂದು ದೊಡ್ಡ ಆಲದ ಮರ ಅದರ ತುಂಬಾ ಗೊಂಚಲು ಗೊಂಚಲಾಗಿ ನೂರುಗಟ್ಟಲೆ  ಕೇಸರಿ, ಕೆಂಪು ಬಣ್ಣದ ಆಲದ ಹಣ್ಣಿನ ರಾಶಿ ಬಿಟ್ಟಿತ್ತು.
 ಆಲದ ಮರದ ಶ್ರೀಮಂತಿಕೆ  ಎದ್ದು ಕಾಣುವಂತೆ ಏನೋ ಸಂಬ್ರಮ.. ಹಬ್ಬದ ವಾತಾವರಣ.. ಹಕ್ಕಿಗಳಹಾಡು... ನೋಡುತ್ತಾ ನಿಂತುಬಿಟ್ಟೆ

" ಅಕ್ಕ ಹಕ್ಕಿಗ್ಲಿಗೆಲ್ಲ ಎಷ್ಟೊಂದು ಹಣ್ಣು ಬಿಟ್ಟಿದೆ ನೋಡಿ ಈ  ಆಲದ ಮರ" ಅಂದ. ಅವನ ಮುಖದಲ್ಲಿ ಸಂತ್ರಪ್ತಿ ಇತ್ತು 

ಅವತ್ತೊಂದು ದಿನ ಗಾಳಿಯಪ್ಪ ಯಾವುದೋ ಕಾಡು ಹಣ್ಣಿನ  ಮರವನ್ನು ಕಡಿದು ಹಾಕ್ತಾ ಇದ್ದ .ಬೇಜಾರು ಮಾಡಿಕೊಂಡು ಹೇಳಿದ್ದೆ  "ಹಕ್ಕಿ ಗಳಿಗೆ ತಿನ್ನೋಕೆ ಕಾಡಿನಲ್ಲಿ ಹಣ್ಣುಗಳೇ ಇಲ್ಲ... ಹಕ್ಕಿಗಾಗಿ ಆ ಮರ  ಇರ್ಲಿ ಬಿಡು " . ಅಂತ .ಆತ ನನ್ನನ್ನೇ ಬೆರಗಾಗಿ ನೋಡಿದ್ದ .



No comments:

Post a Comment