ಉತ್ತರ ಧ್ರುವದಿಂ ದಕ್ಷಿಣ ಧ್ರುವಕು ಚುಂಬಕ ಗಾಳಿಯು ಬೀಸುತಿದೆ....ಅಂಬಿಕಾತನಯದತ್ತ

October 8, 2018

Eau de toilette bottle and The acid rain



ಅಲ್ಲಿರುವ  ಕೊಳ್ಳ ದಲ್ಲಿ ಅರಳಿದ ಲಿಲ್ಲೀ  ಹೂವು ಮತ್ತು ಅದೇ ಕೊಳ್ಳ ದಲ್ಲಿರುವ ಕ್ಯಾಟ್ ಫಿಶ್ ನಡುವೆ ಪ್ರೀತಿ ಹುಟ್ಟಿತ್ತು .ಮಾತಾಡಲು ಸಿಕ್ಕಾಗಲೆಲ್ಲ ನವಿರು ಭಾವಗಳು ..ಆದರೆ ಮೇಲೆ ಬಂದು ಮಾತಾಡುವಾಗ  ಕ್ಯಾಟ್ ಫಿಶ್ ಗೆ   ಉಸಿರು ಕಟ್ಟಿದಂತಾಗಿ  ಮಿಡುಕಾಡಿತ್ತು  ..ಅದಕ್ಕಾಗಿ ಅವು ನೀರ ಗುಳ್ಳೆಗಳ ಮೂಲಕ ತಮ್ಮ ಸಂದೇಶ ಕಳಿಸಿದವು .

ಅವ ಹೇಳಿದ ....-"ನಿನ್ನ ದೇಹದ ಪರಿಮಳ ಮತ್ತು ತರಿಸುವದು "
ಅವಳು ಹೇಳಿದಳು ... "ನೀನು ಸುಂದರಾಂಗ "
ಅವ ಕೇಳಿದ..."ನಿನ್ನ ಆ ಸುಂದರ ದಳಗಳು ಅದೆಷ್ಟು ಮೃದುವಾಗಿರಬಹುದೇನೋ .."
ಅವಳು ಕೇಳಿದಳು ""ನಿನ್ನ ಮೀಸೆ ಕಚಕುಳಿ ಇಡುವದೇ?"

ಸುಂದರ ಯುವತಿಯೊಬ್ಬಳು ಅದೇ ಕಾಡಿನ  ಹಾದಿಯಲ್ಲಿ ಹಾದು ಹೋದಳು .   ಹೋಗುವಾಗ ಕೊಳ್ಳದಲ್ಲಿರುವ ಲಿಲ್ಲಿಹೂ ವಿನ ಸುಗಂಧಕ್ಕೆ ಮಾರು ಹೋಗಿ ಕೊಯ್ದು ಕೊಂಡೆ ಹೋದಳು  ...
ಹೇಳದೆ ಇರುವ ಮಾತುಗಳು.. ಪ್ರಶ್ನೆಗಳು ಇನ್ನು ಉಳಿದಿತ್ತು
ಆ ಯುವತಿ ತನ್ನ  ಇನಿಯನ ಬಳಿ ಆ ಹೂವಿನ  ಅತ್ತರು ಮಾಡಿ ಕೊಡೆಂದಳು .ಅವಳ ಇನಿಯ  ಅವಳಿಗಾಗಿ ಆ ಲಿಲ್ಲೀ ಹೂ ವಿನಿಂದ ಅತ್ತರು ಮಾಡಿ ಬಾಟಲಿಯಲ್ಲಿ ತುಂಬಿ ಕೊಟ್ಟ ..

ಇತ್ತ ಕ್ಯಾಟ್ ಫಿಶ್ ನ್ನು ಮೀನುಗಾರನೊಬ್ಬ ತನ್ನ ಬಲೆಯಲ್ಲಿ ಹಿಡಿದು ಕೊಂಡೊಯ್ದ
ಹೇಳದೆ ಇರುವ ಮಾತುಗಳು.. ಪ್ರಶ್ನೆಗಳು ಇನ್ನು ಉಳಿದಿತ್ತು 

ಮೀನುಗಾರನ ಮನೆಯವರು ಕ್ಯಾಟ್ ಫಿಶ್ ನ್ನು ಹುರಿದು ತಿಂದು ಮುಳ್ಳುಗಳನ್ನೆಲ್ಲ ಮಣ್ಣಿಗೆ ಹಾಕಿದರು.

ಹಾಗೆ ಸಹಸ್ರ ವರ್ಷಗಳು ಕಳೆದು ಹೋದವು
ಕ್ಯಾಟ್  ಫಿಶ್ ನ  ಅವಶೇಷ  ಮಣ್ಣಿನಲ್ಲಿ ಕೊಳೆತು ಇಂಧನವಾಗಿ ಪರಿವರ್ತನೆ ಯಾಗಿತ್ತು

ಈ ಇಂದನವನ್ನು ಸುಟ್ಟಾಗ ಕ್ಯಾಟ್  ಫಿಶ್ ನ ಪಳಿಯುಳಿಕೆ ಉರಿದು ಉಗಿಯಾಗಿ ಗಂಧಕವಾಗಿ ಆಕಾಶ  ತಲುಪಿತ್ತು . ಉಗಿಯನ್ನು ಗಾಳಿ  ದೂಡಿಕೊಂಡು ಅದೇ ಕಾಡಿಗೆ  ಅದೇ ಕೊಳವಿದ್ದ ಜಾಗಕ್ಕೆ  ಹೊತ್ತು ತಂದಿತ್ತು ಕ್ಯಾಟ್  ಫಿಶ್ ನ ಅವಶೇಷ  ಗಂಧಕದ ಮಳೆಯಾಗಿ ಸುರಿಯಲು ತಯಾರಿ ನಡೆಸಿತ್ತು

ಖಾಲಿಯಾದ ಅತ್ತರಿನ ಬಾಟಲಿನ ಮೂಲೆಯಲ್ಲಿ ಅವಶೇಷವಾಗಿದ್ದ ಲಿಲ್ಲೀಹೂವು  ಬಿಸ್ಸಾಕಿದ ಬಾಟ್ಲಿಯಲ್ಲಿ ಮದುರ  ಭಾವ  ಹಿಡಿದು ಕೂತಿತ್ತು ..ತಿಪ್ಪೆಯಲ್ಲಿ ,ನಾಲಿಯಲ್ಲಿ ಸಾಗಿ ಬಂದು ಬಿದ್ದಿದ್ದು
ಅದೇ ಕಾಡಿನ ಒಮ್ಮೆ ಕೊಳ್ಳ ವಿದ್ದ ಜಾಗದಲ್ಲಿ

ಅವ್ಳಿಗೆ ತವಕ ..ಅವ  ಈಗಲೂ ನನ್ನ ಮೃದು ದಳವನ್ನು ನೆನಿಸಿಕೊಂಡಿರುವನೇ ?

ಅವ  ಹೇಳಿದ ,,"ನಾನೀಗ ನಾನಾಗಿಯೇ ಉಳಿದಿಲ್ಲ ..ನನ್ನ ಒಂದು ಹನಿ ನಿನ್ನ ಮೃದು ಮಧುರ ದಳವನ್ನು ಸುಟ್ಟು  ಹಾಕುವ ಭಯ  "

ಅವಳು ಹೇಳಿದಳು "ನಾನೂ  ನಾನಾಗಿ ಉಳಿದಿಲ್ಲ ,, ಒಡೆದು   ಚೂರಾಗಿರುವೆ .."

ಒಮ್ಮೆ ಕೊಳವಾಗಿದ್ದ ಆ ಭೂಮಿ ಒಣಗಿ ಬರಡಾಗಿತ್ತು   ಬಾಟಲಿಯೊಳಗೆ ಅತ್ತರಿನ ಅವಶೇಷವಾಗಿರುವ ಲಿಲ್ಲೀ ಹೂವು   ಕೊಳದ ಹೃದಯ  ಭಾಗದಲ್ಲಿ ಹೂತು ಆಗಸಕ್ಕೆ ಎದೆ ಬಿಚ್ಚಿ ನಿಂತಿತ್ತು..ಧಾರಾಕಾರವಾಗಿ ಮಳೆ ಸುರಿದಿತ್ತು  ಮಳೆಯ ಒಂದೊಂದು  ಹ ನಿಯನ್ನು ಬಿಡದೆ ತನ್ನೊಳಗೆ ತುಂಬಿ ಕೊಳ್ಳತೊಡಗಿತ್ತು .ಬಾಟಲಿ ತುಂಬಿ ತುಳುಕುವವರಿಗೂ ಮಳೆಯಹನಿ ಹನಿ ಯನ್ನು ಆಲಂಗಿಸಿತ್ತು


ಈಗ ನಾನು ನಿನ್ನನ್ನು "ನನಗಾಗಿ ಕಾಯುವೆಯಾ /"ಎಂದು ಕೇಳಿದಾಗೆಲ್ಲ ಇಲ್ಲಿ ಮಳೆ ಸ್ವಲ್ಪ ಜೋರಾಗೆ ಸುರಿಯುವದು


ಅನುವಾದ

April 2, 2013

ಬಸಿರು ..


JzÀÄÝ ¤®ÄèªÀ vÁPÀwÛUÉ ¸À¥ÀÆgÀzÉÆ0zÀÄ PÀwÛ ¸À¢Ý®èzÉà PÉÆAiÀÄÄåwÛvÀÄÛ. PÁªÀÅ PÉÆqÀ®Ä ¸ÀªÀÄAiÀÄ«®è. §¹gÀÄ MqÉzÀÄ gÀPÀÛ PÁj §zÀÄPÀ ¨ÉÃrvÀÄÛ .  £ÉÆêÀÅ  CqÀV PÀĽvÀÄ ¨ÉÃmÉAiÀiÁrvÀÄÛ. ªÀiË£À GjzÀÄ §Æ¢AiÀiÁUÀÄwÛvÀÄÛ .

§zÀÄPÀÄ §¸ÀªÀ½zÀÄ  PÀuÉÆÚ¼ÀUÉ E½zÀÄ gÀPÀÛMgɹ  ªÉÄAiÀÄå £ÀÄtÄ¥ÀÄ ¸ÀªÀj §zÀÄPÀ ºÉÆgÀnvÀÄÛ . ªÀÄƯÉAiÀÄ°è ¨É¼ÀPÀÄ ºÀÄnÖ ¸ÁAiÀÄÄwÛvÀÄÛ .ªÀÄtÚ vÉÆÃr ¸À¹ £ÉqÀĪÁUÀ eÁUÀ ºÀPÀÄÌ PÉývÀÄÛ. §¢AiÀįÉèà ©ÃdªÉÇ0zÀÄ UÀr©rAiÀÄ°è ªÀÄgÀªÁV ¨É¼ÉzÀÄ PÁªÀ®Ä PÁAiÀÄvÉÆqÀVvÀÄ

ªÀÄ£À¸ÀÄ...PÀ£À¸ÀÄ..§AiÀÄPÉ.., §¹gÀÄ.. PÀ®¹ ºÉÆÃV ¦æÃw J¼ÉUÀ¼É®è ¹PÀÄÌ ¹PÁÌV ©r¹PÉƼÀÄîªÀ ªÀÄÄ£Àß §zÀÄPÀÄ  NrvÀÄÛ.

J®è ©lÄÖ £Á£ÀÄ £ÉlÖ ©Ãd  K¼À¯É0§ §AiÀÄPÉ ªÀÄgÀªÁV  eÁUÀ §AiÀĹvÀÄÛ.§zÀÄPÀÄ ªÀÄÄVzÀÄ ºÉÆÃUÀĪÀ ªÀÄÄ£Àß ºÉªÀÄägÀªÁUÀĪÀ §AiÀÄPÉUÉÆ0zÀÄ §¹gÀÄ PÁAiÀÄÄwÛvÀÄÛ .

  



February 10, 2013

ಬಲೆಯಲ್ಲಿ ಚಂದ್ರ


ಜೇಡರ  ಬಲೆಯಯಲ್ಲಿ
ಚಂದ್ರ
ಸಿಕ್ಕಿಬಿದ್ದಿದ್ದ 

ಸಿಡಿಸಿಡಿಯುವ ತಲೆಗೆ
ಅಬ್ಬರದ ನಗು 
ಮೊಳೆ ಹೊಡೆಯುತ್ತಿತ್ತು 

ಸೂರ್ಯ ಕೆ೦ಪಾಗಿ
ಕಣ್ಣಿನಾಳಕ್ಕೆ ಇಳಿದು 
ಮುಳುಗುತ್ತಿದ್ದ 

ಜೋಕಾಲಿ ಆಡುವ ಹೃದಯ  
ಪ್ರೀತಿಯ  ಎಳೆಯಲ್ಲಿ
ಸಿಕ್ಕುಸಿಕ್ಕಾಗಿತ್ತು

ಕುಣಿತಕ್ಕೆ
ಎದೆಯ ಬಡಿತ
ತಾಳ ಹಾಕುತ್ತಿತ್ತು

ಕಪ್ಪು ಕತ್ತಲೆಯಲ್ಲಿ
ಸೋಲಿನ ನೆರಳು
ನಿಧಾನ ಕರಗುತ್ತಿತ್ತು 

ಬಲೆಯಿಂದ 
ಬಿಡಿಸಿಕೊಂಡು ಚಂದ್ರ
ಆಕಾಶದಲ್ಲಿ ಓಡುತ್ತಿದ್ದ 



a moon in a web  http://shoonya-shoonyata.blogspot.in

February 8, 2013

ಮೌನ ...


ಮೌನ ಬೀಜ 
ಮಳೆಗಾಗಿ
ಕಾದು ಕಾದು 
ಮಣ್ಣಿನೊಳಗೆ 
ಹೂತು ಹೋಗಿತ್ತು 

*
ಮೌನ
ಗಾಳ ಹಾಕಿ 
ಮೀನಿಗಾಗಿ
ಕಾಯುತ್ತಿತ್ತು

*
ಹುಲ್ಲ ತುದಿಗೆ
ಮೌನದ
 ಹನಿಯೊಂದು
ಬಿಸಿಲಿಗಾಗಿ ಕಾಯುತ್ತಿತ್ತು 

*
ಶರ ಪಂಜರದೊಳಗೆ 
ಮೌನದ ಆಕ್ರಂದನ 
ಶಾಂತಿಗಾಗಿ ಕಾಯುತ್ತಿತ್ತು 

*
ಪದಗಳ ಹುಡುಕುತ್ತ
ಕಳೆದು ಹೋದ ಮೌನ 
ಮಾತಾಡಲು ಕಾಯುತ್ತಿತ್ತು 


Silence-2 http://shoonya-shoonyata.blogspot.in






February 7, 2013

ಚಳಿಗಾಲ ..

ಮಂಜು ಮುಸುಕಿದ ಮುಂಜಾವು
ಕಿಟಕಿಯ ಗಾಜಿನ ಮೇಲೆ 
ಹೆಪ್ಪುಗಟ್ಟಿದ ಹಿಮದ ಒಂಟಿತನ 
ತುದಿ ಬೆರಳಿನಲ್ಲಿ ನಿನ್ನ ಹೆಸರು ಬರೆದಿತ್ತು  .
ನಿಧಾನ..ಮೆಲ್ಲ ಮೆಲ್ಲಗೆ  .
ನನ್ನ ಬೆಚ್ಚನೆಯ ಉಸಿರಿಗೆ 
ಕರಗಿ..  ಎಳೆಎಳೆಯಾಗಿ 
ಮೆಲ್ಲಗೆ  ಜಾರುವ ನಿನ್ನಹೆಸರಿಗೆ ಸುಡು ಸುಡುವ 
ನನ್ನುಸಿರ ಕಾವು
ಚಿತ್ತಾರ ಬಿಡಿಸಿತ್ತು  
ನಿಧಾನ ಕರಗತೊಡಗಿ  ನಿನ್ನ ಹೆಸರು
ಆಕಾರ ಕಳೆದುಕೊಂಡು ನನ್ನ ಆಳಕ್ಕಿಳಿದು 
ಹನಿ ಹನಿಯಾಗಿ  ತೊಟ್ಟಿಕ್ಕುತ್ತಿತ್ತು
winter..http://shoonya-shoonyata.blogspot.in


January 19, 2013

ಸುಪ್ತ ......


And when you're needing your space
To do some navigating
I'll be here patiently waiting
To see what you find

--  I Won't Give Up - Jason Mraz





ನಾನೂ ಮರೆತಿಲ್ಲ ...ಅಲ್ಲಿ ನೀನೂ   ಮರೆತಿಲ್ಲ... 
ಅದರೂ ಕಾಯುವ ಹಂಬಲ ....
ಅಸಹನೀಯ ಆಗದೆ ಹೋಗದಿರಲಿ ..
ಕಾಯುವ ಕೆಲಸ ...
ಬದುಕಿನಲ್ಲಿ ಸಿಕ್ಕಿರುವದನ್ನು ಯಾವಾಗಲೂ ಅರಿತವಳಲ್ಲ ನಾನು ....  ಚಿಕ್ಕವಳಿದ್ದಾಗಿನಿಂದ  ಭಯವೊಂದು ಉಳಿದುಕೊಂಡು ಬಿಟ್ಟಿದೆ .
ಕಳೆದು ಕೊಳ್ಳುವ... ಕಳೆದು ಹೋಗುವ ಭಯ ..ಅದಕ್ಕೆ....   ಸಿಗದಿರುವ ಬಗ್ಗೆ  ಸಮಾಧಾನವೂ ಇದೆ... ತಳಮಳವೂ ಇದೆ ..

ಆಚೆ  ಬದಿಗೆ ಇರುವ ನಿನಗೂ ಒಂದು   ಮನಸು.. ಕನಸು.. ಇದೆ ಅಂತ ಅರ್ಥ ಮಾಡಿ ಕೊಳ್ಳುವ ಭಾವುಕತೆ ಕೆಲವೊಮ್ಮೆ  ಭಯದಲ್ಲಿ ಕರಗಿ ಹೋಗುತ್ತದೆ
.ಒಂದಿಷ್ಟು ತಳಮಳ..ಒಂದಿಷ್ಟು ಸಮಾಧಾನ ,ಒಂದಿಷ್ಟು ಕಸಿವಿಸಿ ...ಒಂದಿಷ್ಟು  ದೂರ ...ಒಂದಿಷ್ಟು ಸಾಮಿಪ್ಯ ... ಒಂದಿಷ್ಟು ಅಂತರ... ಇವೆಲ್ಲದರ ಆಚೆ  ನನಗೂ  ಮನಸ್ಸೊಂದಿದೆ... 
ನನ್ನ ಹೆಪ್ಪುಗಟ್ಟಿದ ಭಾವಗಳೆಲ್ಲ ಕರಗಬೇಕು ... ಹೊಸತೊಂದು ಬೆಚ್ಚನೆಯ ಭಾವದಲ್ಲಿ .. 

ಇವತ್ತು ನನ್ನ ದಿನ.. ನನ್ನರಾತ್ರಿ  ..
ಮ್ರದು ಮದುರ ಭಾವಕ್ಕೆ  ರಾತ್ರಿಯ ತ೦ಗಾಳಿಗೆ 
ಜೊತೆ ಜೊತೆಗೆ ಹೆಜ್ಜೆ ಹಾಕುವ ಮನಸು 
ಒಂಟಿ ರಾತ್ರಿಯ  ಬರೆಯುವಾಗಿನ ಭಾವೆನೆಯೇ ಬೇರೆ ..
ಎದುರುಬದುರು ಕೂತು ಮಾತನಾಡುವದೂ   ಸೊಗಸು ನನಗೆ
ಅಶರೀರವಾಣಿಯ೦ತೆ ಮೊಳಗುವ ಟೆಕ್ನೊಲಜಿಯಲ್ಲಿ ಮಾತುಗಳೂ ಯಾ೦ತ್ರಿಕವೆನಿಸುತ್ತವೆ ನನಗೆ.
ಪರಿಪೂರ್ಣತೆಯ ಹ೦ಗು ನಮಗ್ಯಾಕೆ ?
ಹೇಗಿದ್ದೇವೋ ಹಾಗೇ ..ಬದುಕು ಸರಳ .. ಸಹಜ
ನಾನು ಸಾಮಾನ್ಯಳು ...
ಜನ ಎತ್ತರಕ್ಕೆರಿಸಿದರೆ ಮುಜುಗರ ಗೋಪುರ   ಕಟ್ಟುತ್ತದೆ
ಎದ್ದು ಬರಿಗಾಲಲ್ಲಿ ಓಡಿ ಹೋಗಿ ದೂರ ಬಯಲಿನಲ್ಲಿ ಆಕಾಶ ನೋಡುತ್ತಾ ಅಂಗಾತ  ಮಲಗಬೇಕೆನಿಸುತ್ತದೆ ..
ಇವತ್ತಿನ ರಾತ್ರಿಯ  ಮೌನ ನನ್ನ ಮೌನದೊ೦ದಿಗೆ ನನ್ನ ನೇವರಿಸುತ್ತ ಕುಳಿತಿದೆ.
ಎಷ್ಟು ದಿನವಾಯ್ತು ನಾನು ನನ್ನ ಮೌನಕ್ಕೆ
ಮಾತಾಡಿಸಲೇ ಇಲ್ಲ