ಉತ್ತರ ಧ್ರುವದಿಂ ದಕ್ಷಿಣ ಧ್ರುವಕು ಚುಂಬಕ ಗಾಳಿಯು ಬೀಸುತಿದೆ....ಅಂಬಿಕಾತನಯದತ್ತ

February 1, 2011

Farewell....!!!

ತಿಂಗಳು ಫೆಬ್ರುವರಿ ...ಚಳಿಗಾಳಿಗೆ ಸ೦ಯ್ಗುಡುವ  Valley ಯ ಮರಗಳೆಲ್ಲಾ ಎಲೆ ಉದುರಿಸಿಕೊಂಡು ಏನೋ ಕಳೆದುಕೊಂಡಂತೆ ನಿಟ್ಟುಸಿರು ಬಿಡುತ್ತವೆ ...ಮತ್ಯಾರಿಗೊ ಕಾಯುವ ಶಬರಿಗಳು...
ಗಾಳಿ ಬೀಸುವಾಗ ಉರುಳಿ ಉರುಳಿ ದಾರಿ ಹುಡುಕುವ.... ಕಳೆದುಹೋಗುವ ಒಣ ಎಲೆಗಳು  ಗೋಳಿಡುತ್ತವೆ
Dry  leaves rustled their goodbyes. Lost and confused... the  sigh of the tree. They crushed,dried and died.. the tree waited silently watching the leaves..loved and lost...

ಅದೇ ದಾರಿಯಲ್ಲಿ ಒಬ್ಬಳೇ ನಡೆಯುತ್ತೇನೆ. ದೂರ..ಮತ್ತೆಷ್ಟು ದೂರ.....ನೆನಪುಗಳ ಹಿಂದೆ ಹಾಕಿ.. ಕಾಲಡಿಗೆ ಮುಲುಗುಡುವ ಸದ್ದು....
She could hear the crunch, and she could feel the pain.the unknowing heels....  she could not stop..  Memories, which were faded and worn. 

ದೂರದಲ್ಲೆಲ್ಲೋ ಮಕ್ಕಳು ಆಡುವ ಸದ್ದು ಗದ್ದಲದಲ್ಲಿ ಮೌನ ಮುಲುಗುಡುತ್ತದೆ
ದೇವಯಾನಿ, ನಿರ್ಜರ, ಅವ0ತಿ , ಅಂತರ  ಎದುರಾಗುತ್ತಾರೆ." ಪಲ್ಲವಿ ಟೀಚರ್  ..."ಎಂದು ಕುಶಿ ಕುಶಿಯಾಗಿ ಕರೆದು ಸಂಭ್ರಮದಲ್ಲಿ ಹಾದು ಹೋಗುತ್ತಾರೆ.
ನಿನ್ನೆಯಷ್ಟೇ Farewell ಮುಗಿಸಿದ ಹನ್ನೆರಡನೆ ಕ್ಲಾಸಿನ ಹುಡುಗ ಹುಡುಗಿಯರು ರಾತ್ರಿ ಸ್ಕೂಲ್ ನಲ್ಲೆ night out ಮಾಡಿ ರಾತ್ರಿಯೆಲ್ಲಾ ನಿದ್ದೆ ಮಾಡದೆ ಕಳೆದು ಹೋದ ಕನಸು ಗಳನ್ನ Valley ಯಲ್ಲಿ ಬೆಳಿಗ್ಗೆ ಹುಡುಕುತ್ತಾರೆ..
ದೂರ ದೂರದವರೆಗೂ ನಡೆದೇ ಹೋದೆ... ಎಲ್ಲಿಯೋ ಒಂಟಿತನ ಆಳ ಬಾವಿಯಲ್ಲಿ ಕೂಗು ಹಾಕುತ್ತದೆ.
Valley ಯ ಎಲೆ ಉದುರಿಸಿ ನಿಂತ ಮರಗಳಂತೆ ....ಕಳೆದು ಹೋಗುವ ಭಯದಲ್ಲಿ ಓಡೋಡಿ ದಾರಿ ಹುಡುಕುವ ತರಗೆಲೆಗಳಂತೆ...
 ಹನ್ನೆರಡನೆ ಕ್ಲಾಸಿನ ಮಕ್ಕಳು ಕಾಣುತ್ತಾರೆ. ಮುಂದಿನ ತರಗತಿಗೆ ಹೋಗಲು ಗಂಟೆ ಬಾರಿಸುವ ಸದ್ದು ದೂರದಲ್ಲಿ ಮೊಳಗುತ್ತದೆ.ಕಾಲು ಸೋಲುತ್ತದೆ...


2 comments:

Anonymous said...

ಈ ಲೇಖನದಲ್ಲಿ ಒಂದು ನವಿರಾದ,ಹಸಿಹಸಿಯಾದ ಪಲ್ಲವಿಕೆಯಿದೆ. ’ಮಕ್ಕಳು’ ಮತ್ತು ’ವ್ಯಾಲಿ’ಮರದ ನಡುವೆ ಇರುವ ಭಾವ ಸೇತು ಅನನ್ಯವಾಗಿ ಚಿತ್ರಿತವಾಗಿದೆ. nice lines.

Prabhu Iynanda said...

ನೆನಪುಗಳ ಹಾದಿಯಲ್ಲಿ ಭಾವಗಳ ಹೆಜ್ಜೆಗಳಿವು. ತರಗೆಲೆಗಳ ಸರಸರಾಟದಲ್ಲಿ ಕಳೆದುಹೋದುದನ್ನು ಹುಡುಕುವ ಯತ್ನವಿದೆ. ನೆನಪುಗಳನ್ನು ಹಿಂದೆಹಾಕಲೆತ್ನಿಸಿದರೂ loved and lost and cofused ಆದರೂ ಅಲ್ಲಲ್ಲಿ ಪರಿಚಯದ ಸದ್ದು, ಒಣ ಪುರುಲೆಗಳ crunch... sigh of trees...

"ಹನ್ನೆರಡನೆ ತರಗತಿಯ ಹುಡುಗಿಯರು ಗುರುತಿಸಿತ್ತಾರೆ...ಸಂಭ್ರಮದಿ ಪಲ್ಲವಿಸುತ್ತಾರೆ.......ಕಳೆದು ಹೋಗುವ ಭಯದಲ್ಲಿ ಓಡೋಡಿ ದಾರಿ ಹುಡುಕುವ ತರಗೆಲೆಗಳಂತೆ..." - ಸೊಗಸಾಗಿದೆ ಭಾವಕ್ಕೊಂದು ಪ್ರತಿಮೆ.

ಮೊಳಗುವ ಗಂಟೆ ವಾಸ್ತವಕ್ಕೆ ಬಾ ಎಂದೆಚ್ಚರಿಸುತ್ತದೆ.

ಇದಕ್ಕೆ ಗದ್ಯವೆಂದು ಹೆಸರಿಸಲಾರೆ; ಹೃದ್ಯ ಪದ್ಯವೆನ್ನಲಾರೆ.. ಭಾವಗಳ ಒಳತೋಟಿಯನೆಂತು ಕರೆಯಲಿ? ಏಕೆ ಕರೆಯಲಿ? ಹೆಸರಿಡದೆ ಅನುಭವಿಸುವೆ. ಹೆಸರಿನಿಂದೇನಿದೆ? ಹೃದಯ ತಟ್ಟಿದೆಯಲ್ಲಾ, ಅದು ಸಾಕು...

ಅಭಿನಂದನೆಗಳು, ಸುಪ್ತ...

Post a Comment