ಉತ್ತರ ಧ್ರುವದಿಂ ದಕ್ಷಿಣ ಧ್ರುವಕು ಚುಂಬಕ ಗಾಳಿಯು ಬೀಸುತಿದೆ....ಅಂಬಿಕಾತನಯದತ್ತ

February 23, 2011

ಮೌನ. ಬಸಿರು..!!


ಮೌನ ಬಸಿರಾಗಿತ್ತು...
ಯಾವ ಗಂಡಿನ ಸಂಗವೂ ಆಗಿರಲಿಲ್ಲ...
ಆದರೂ... ಮೌನ  ಬಸಿರಾಗಿತ್ತು ......?!

ಮೌನದ ಒಳಗೊಂದು ಮೂರ್ತ  ರೂಪ.....
ನಾಜೂಕಾಗಿ ..ನಯವಾಗಿ..
ನೋಡು ನೋಡುತ್ತಿದ್ದಂತೆಯೇ  ತಯಾರಾಗುತ್ತಿತ್ತು.

ಏನೋ ತಳಮಳ... ತಲೆಸುತ್ತು .. ವಾಂತಿ...
ಒಳಗೊಂದು ಹೊಸಜೀವ ಸದ್ದಿಲ್ಲದೇ ಮೂಡುತ್ತಿತ್ತು .
ಅದರ ಹ್ರದಯದ ಬಡಿತ ಸಣ್ಣಗೆ 
ಧಕ್ ಧಕ್.. ಧಕ್ ಧಕ್  ... 
ಕಣ್ಣು... ಮೂಗು  ಯಾರ ಹಾಗೋ ...
ಮೌನ ಬಸಿರಾಗಿತ್ತು  !


ಹೊಸ ಜೀವದ ಸೆಲೆ ಒಡೆದಿತ್ತು  ..
ಮೌನ ಜೀವ ಕಳೆ....ಮೌನ ಮಲ್ಲಿಗೆ ...
ಮೌನ ನಿನ್ನ ತಟ್ಟಬಹುದು .ಮುಟ್ಟಬಹುದು ...
ನಿನ್ನಾಳಕ್ಕೆ ಇಳಿದು ನೋಡಲೂ ಬಹುದು .
ನೀ ಮಾತಾಡಿ   ಮುಟ್ಟಿ ಮ್ಯೆಲಿಗೆ ಮಾಡದಿರು.. .
ಮಾತು-  ಬರಿ ಬುರುಡೆ...ಬರಿದು.. ಖಾಲಿ...
ಸದ್ಯ ದೂರ ನಿಂತು ನೋಡು .

ಮೌನ  ಇನ್ನೂ ತುಂಬು ಬಸಿರಿ... ನಾಜೂಕು..
ಒಡಲತುಂಬಾ ಭಾವನೆಗಳ ಒಜ್ಜೆ ಹೊತ್ತು ಮೆಲ್ಲಗೆ ನಡೆಯಲಿ ..
ಜಾರಿ ಬೀಳದಿರಲಿ...
ಮೌನ ಬಯಕೆಗಳ ಪೂರಯಿಸಿ  ಬರಲಿ..

ಆ ದಿನವೂ ಬಂತು 
ಜೋಕಾಲಿ ಆಡಿ ...ಆಡಿ ..ಆಡಿ..ಸುಸ್ತಾಗಿತ್ತು ಮೌನ..
ಬರಿ ಜೀಕುವ ಶಬ್ದ...
ಜೀಕ್...ಜೀಕ್..ಜೀಕ್..ಜೀಕ್..
ನಿಧಾನವಾಗುತ್ತ  ಹೋಯ್ತು  .. 
ತವಕದ ಕಣ್ಣು... ತಳಮಳ..
ಕೊನೆಗೆ ಎಲ್ಲ ನಿಶಬ್ದ..


ಮೌನ ಸತ್ತಿತ್ತು...!!   
ಮೌನ ಸತ್ತು ಹುಟ್ಟಿತ್ತು 
ಒಂದು ಮುಗುಳ್ನಗೆ...
ಒಂದಲ್ಲ ನೂರೊಂದು  ಮುಗುಳುನಗೆ...!!!

ಪ್ರೇರಣೆ:silence.pregnant  shoonya-shoonyata.blogspot.com 








No comments:

Post a Comment