ಉತ್ತರ ಧ್ರುವದಿಂ ದಕ್ಷಿಣ ಧ್ರುವಕು ಚುಂಬಕ ಗಾಳಿಯು ಬೀಸುತಿದೆ....ಅಂಬಿಕಾತನಯದತ್ತ

February 8, 2013

ಮೌನ ...


ಮೌನ ಬೀಜ 
ಮಳೆಗಾಗಿ
ಕಾದು ಕಾದು 
ಮಣ್ಣಿನೊಳಗೆ 
ಹೂತು ಹೋಗಿತ್ತು 

*
ಮೌನ
ಗಾಳ ಹಾಕಿ 
ಮೀನಿಗಾಗಿ
ಕಾಯುತ್ತಿತ್ತು

*
ಹುಲ್ಲ ತುದಿಗೆ
ಮೌನದ
 ಹನಿಯೊಂದು
ಬಿಸಿಲಿಗಾಗಿ ಕಾಯುತ್ತಿತ್ತು 

*
ಶರ ಪಂಜರದೊಳಗೆ 
ಮೌನದ ಆಕ್ರಂದನ 
ಶಾಂತಿಗಾಗಿ ಕಾಯುತ್ತಿತ್ತು 

*
ಪದಗಳ ಹುಡುಕುತ್ತ
ಕಳೆದು ಹೋದ ಮೌನ 
ಮಾತಾಡಲು ಕಾಯುತ್ತಿತ್ತು 


Silence-2 http://shoonya-shoonyata.blogspot.in






1 comment:

Prabhu Iynanda said...

೧ನೇ, ೩ನೇ ಮತ್ತು ೫ನೇ ಸ್ಟಾಂಜಾಗಳು ಬಹಳ ಚೆನ್ನಾಗಿವೆ.
ಮೌನದ ಕುರಿತು ಭಾಷ್ಯ ಒಟ್ಟಿನಲ್ಲಿ ಅರ್ಥಪೂರ್ಣವಾಗಿದೆ.

Post a Comment