ಉತ್ತರ ಧ್ರುವದಿಂ ದಕ್ಷಿಣ ಧ್ರುವಕು ಚುಂಬಕ ಗಾಳಿಯು ಬೀಸುತಿದೆ....ಅಂಬಿಕಾತನಯದತ್ತ

March 3, 2011

ದಾಹ !!

ಹಾಗೆ ಸುಮ್ಮನೆ ..ಪ್ರೀತಿ ಮಾಡುತ್ತಾಳೆ ... 
ಸದ್ದಿಲ್ಲದೇ ಸಲಿಗೆ ಮಾಡುತ್ತಾಳೆ 
ತೂಗಿ,,ತೂಗಿ,,  ಮರಳು ಮಾಡುತ್ತಾಳೆ ...

ಆಮೇಲೆ ಇಡಿಯಾಗಿ ನಿನ್ನನ್ನೇ ಹೀರಿ ಬಿಡುತ್ತಾಳೆ  ..
ಹಾಗೆ ಸುಮ್ಮನೆ !!
ಪ್ರಣಯದಾಟದ ನಂತರ ದಾಹ ತೀರುವದಿಲ್ಲ 
... ರಕ್ತ ಹೀರುವ ದಾಹ ..
ನೀನು ಪ್ರಣಯದಲ್ಲಿ ಪ್ರವೀಣ!! 
ನಿನ್ನ ಅಪ್ಪುಗೆಯಲ್ಲಿ   ಹಸಿವಿಗೂ  ಉನ್ಮಾದ ...   
ಅಷ್ಟಕ್ಕೇ ನಿನ್ನ ಕತೆ ಮುಗಿದಂತೆ 

ಪ್ರಣಯ... ಹಸಿವು ....ಧಗ ದಗಿಸುವ ದಾಹ.....
ಮತ್ತೆ ಪ್ರಣಯದಾಟ.. ದಾಹ ..

ಅವಳು  ಬಲೆಯ  ಹೆಣೆಯುವಳು... 
ನಾಜೂಕಾಗಿ..  ಎಳೆಎಳೆಯಾಗಿ...
ನಿನಗಾಗಿ  ಕಾಯುವಳು...ಆತುರವಿಲ್ಲ...
ಹೊಂಚುಹಾಕಿರುವದು ನಿನಗೆ ಗೊತ್ತೂ ಇಲ್ಲ  .

ಆಗಲೇ ನಿನ್ನ ಮ್ಯೆ  ಮನವನ್ನೆಲ್ಲಾ ನೇವರಿಸುವಳು.. 
ಮೆಲ್ಲಗೆ ಕಚಗುಳಿ ಇಡುವಳು ,, 
ನಿನ್ನ ಕಾತರ ..ಆತುರವ 
ಮೆಲ್ಲನೆ ಸವರುವಳು .. 

ಮೆಲ್ಲಗೆ ನಿನ್ನ ಕಿವಿಯಲ್ಲಿ ಉಸುರುವಳು ...
ಪ್ರಣಯದಾಟಕ್ಕೆ ತೂಗು ಹಾಸಿಗೆ ಹಾಸಿರುವೆ ಬಾ 


 .
ಪ್ರೇರಣೆ  tarantula  shoonya-shoonyata.blogspot.com 








Photo courtesy: Balu:




No comments:

Post a Comment