ಉತ್ತರ ಧ್ರುವದಿಂ ದಕ್ಷಿಣ ಧ್ರುವಕು ಚುಂಬಕ ಗಾಳಿಯು ಬೀಸುತಿದೆ....ಅಂಬಿಕಾತನಯದತ್ತ

February 10, 2013

ಬಲೆಯಲ್ಲಿ ಚಂದ್ರ


ಜೇಡರ  ಬಲೆಯಯಲ್ಲಿ
ಚಂದ್ರ
ಸಿಕ್ಕಿಬಿದ್ದಿದ್ದ 

ಸಿಡಿಸಿಡಿಯುವ ತಲೆಗೆ
ಅಬ್ಬರದ ನಗು 
ಮೊಳೆ ಹೊಡೆಯುತ್ತಿತ್ತು 

ಸೂರ್ಯ ಕೆ೦ಪಾಗಿ
ಕಣ್ಣಿನಾಳಕ್ಕೆ ಇಳಿದು 
ಮುಳುಗುತ್ತಿದ್ದ 

ಜೋಕಾಲಿ ಆಡುವ ಹೃದಯ  
ಪ್ರೀತಿಯ  ಎಳೆಯಲ್ಲಿ
ಸಿಕ್ಕುಸಿಕ್ಕಾಗಿತ್ತು

ಕುಣಿತಕ್ಕೆ
ಎದೆಯ ಬಡಿತ
ತಾಳ ಹಾಕುತ್ತಿತ್ತು

ಕಪ್ಪು ಕತ್ತಲೆಯಲ್ಲಿ
ಸೋಲಿನ ನೆರಳು
ನಿಧಾನ ಕರಗುತ್ತಿತ್ತು 

ಬಲೆಯಿಂದ 
ಬಿಡಿಸಿಕೊಂಡು ಚಂದ್ರ
ಆಕಾಶದಲ್ಲಿ ಓಡುತ್ತಿದ್ದ 



a moon in a web  http://shoonya-shoonyata.blogspot.in

1 comment:

supta said...

ಧನ್ಯವಾದ ಪ್ರಭು ! ಚಂದ್ರನಿಗೂ ಸೋಲಿನ ನೆರಳು ಕಾಡುತ್ತದೆ... ಬದುಕು ಸಿಕ್ಕಾಗಿ... ಎಲ್ಲೋ ಯಾಕೂ ಸಿಕ್ಕಿ ಹಾಕಿಕೊ೦ಡಿದ್ದೆವೆ ಅನ್ನಿಸುವದು ಸತ್ಯ ... ಬದುಕು ನಿರಾಳ ಅಂತ ಅನ್ನಿಸಿದಾಗ ಅದಮ್ಯ ಆಗಸದಲ್ಲಿ ಚಂದ್ರ ಬಿಡುಗಡೆಯಾಗಿ ತೇಲುತ್ತಿರುತ್ತಾನೆ .

Post a Comment