ಉತ್ತರ ಧ್ರುವದಿಂ ದಕ್ಷಿಣ ಧ್ರುವಕು ಚುಂಬಕ ಗಾಳಿಯು ಬೀಸುತಿದೆ....ಅಂಬಿಕಾತನಯದತ್ತ

February 7, 2013

ಚಳಿಗಾಲ ..

ಮಂಜು ಮುಸುಕಿದ ಮುಂಜಾವು
ಕಿಟಕಿಯ ಗಾಜಿನ ಮೇಲೆ 
ಹೆಪ್ಪುಗಟ್ಟಿದ ಹಿಮದ ಒಂಟಿತನ 
ತುದಿ ಬೆರಳಿನಲ್ಲಿ ನಿನ್ನ ಹೆಸರು ಬರೆದಿತ್ತು  .
ನಿಧಾನ..ಮೆಲ್ಲ ಮೆಲ್ಲಗೆ  .
ನನ್ನ ಬೆಚ್ಚನೆಯ ಉಸಿರಿಗೆ 
ಕರಗಿ..  ಎಳೆಎಳೆಯಾಗಿ 
ಮೆಲ್ಲಗೆ  ಜಾರುವ ನಿನ್ನಹೆಸರಿಗೆ ಸುಡು ಸುಡುವ 
ನನ್ನುಸಿರ ಕಾವು
ಚಿತ್ತಾರ ಬಿಡಿಸಿತ್ತು  
ನಿಧಾನ ಕರಗತೊಡಗಿ  ನಿನ್ನ ಹೆಸರು
ಆಕಾರ ಕಳೆದುಕೊಂಡು ನನ್ನ ಆಳಕ್ಕಿಳಿದು 
ಹನಿ ಹನಿಯಾಗಿ  ತೊಟ್ಟಿಕ್ಕುತ್ತಿತ್ತು
winter..http://shoonya-shoonyata.blogspot.in


1 comment:

Prabhu Iynanda said...

ಸುಪ್ತ!
ಕವನ ತುಂಬ ಹಿಡಿಸಿತು.
ಭಾವನಾತ್ಮಕ, ಭಾವಪೂರ್ಣ ಎಂದರೆ ಸಾಲದಾದೀತು...
ಭಾವುಕತೆಯ ಉತ್ತುಂಗತೆಯೇನು?

Post a Comment