ಉತ್ತರ ಧ್ರುವದಿಂ ದಕ್ಷಿಣ ಧ್ರುವಕು ಚುಂಬಕ ಗಾಳಿಯು ಬೀಸುತಿದೆ....ಅಂಬಿಕಾತನಯದತ್ತ

July 13, 2011

ಮಧ್ಯಾನದ ಮಳೆ


ಹಳೆಯ ನೆನಪುಗಳೆಲ್ಲಾ 
ತುಂತುರು 
ಮಳೆಯಾಗಿ 
ನೆಲವೆಲ್ಲಾ ಒದ್ದೆ ಒದ್ದೆ 


ಹಸಿ ಮಣ್ಣ  ಕಂಪಿನ   ಮೇಲೆ  
ಹೊಚ್ಚ ಹೊಸ ನೋವಿನೆಳೆಯ ವಾಸನೆ 
 ಸವಾರಿ ಮಾಡಿ 
ಸುತ್ತೆಲ್ಲ 
ತಂಗಾಳಿ ಹಸಿ ಬಿಸಿ 


ನಿನ್ನ ಸಾಮಿಪ್ಯದಲ್ಲಿ 
ಮಳೆಯ ಕರಿ  ಮೋಡ 
ದಟ್ಟವಾಗಿ... ಭಾರವಾಗಿ 
ಕವಿದಿತ್ತು 


ನಾನು ಒಳಹೊಕ್ಕು 
ಒಂಟಿಯಾಗಿ 
ಒಬ್ಬಳೇ 
 ನನ್ನನ್ನೇ  ನನ್ನಸುತ್ತ   ಸುತ್ತಿ 


Photo: Varsha Samuel









2 comments:

Kirti said...

chennagide nimm blog... kavan chennigide

DA RAGHAVENDRA RAO said...

ನಿಮ್ಮ ಕವನದಲಿ ಮೊದಲ ಮಳೆಯ ಮಣ್ಣಿನ
ಘಮಲು ಹೊರ ಹೊಮ್ಮತ್ತಾ ಇದೆ.

Post a Comment