ಉತ್ತರ ಧ್ರುವದಿಂ ದಕ್ಷಿಣ ಧ್ರುವಕು ಚುಂಬಕ ಗಾಳಿಯು ಬೀಸುತಿದೆ....ಅಂಬಿಕಾತನಯದತ್ತ

April 9, 2011

ಸಾವು










ಇಂದು..
ನಾಳೆ...
ಮತ್ತೊಂದಿಷ್ಟು ದಿನ...
ನಿನ್ನ ಬದಿಯಲ್ಲೇ  ಕಾದು ಕುಳಿತಿದೆ  ಸಾವು 

ನನ್ನನೆ ಪಿಳಿಪಿಳಿ ನೋಡುವ ನಿನ್ನ ಕಣ್ಣು ...
ಮಾತೆಲ್ಲ ಕಣ್ಣಲ್ಲಿ ತುಂಬಿ ಕೊಂಡಂತೆ ..
ನುಂಗಲಾರದ   ನೋವು  ...

ನಿನ್ನ ನೋವ ನೇವರಿಸಿ...
ಸಾವರಿಸಿಕೊಳ್ಳದ ನನ್ನ  ಮನಸಿನ ಕ್ಯೆ ಸೋತು ಬಿದ್ದಿದೆ

ನಿನ್ನ ಕಣ್ಣು ಮಂಜಾಗುವ ಮುನ್ನ 
ನೀನು ನನ್ನ ಹಿಂಬಾಲಿಸುತ್ತಾ ಕುಸಿದು ಬೀಳುವ ಮುನ್ನ 
ನಿನ್ನ ಕೊನೆಯುಸಿರ ಬಿಸಿ ತಣ್ಣಗಾಗುವ ಮುನ್ನ ...                     

ನಿನ್ನ  ತಬ್ಬಿ ನಿನ್ನ ಕಿವಿಯಲ್ಲಿ ಉಸುರುವೆ 
ನನ್ನ ಮನೆಯಂಗಳದ ಗಿಡದಲ್ಲಿ 
ಪುಟ್ಟ ಹಕ್ಕಿಯಾಗಿ ಹುಟ್ಟಿ   ಬಾ ....
ನಾನು -ನೀನು ಮೌನದಲಿ ಮತ್ತೆ ಸ್ಪಂದಿಸುವ !



No comments:

Post a Comment