ಉತ್ತರ ಧ್ರುವದಿಂ ದಕ್ಷಿಣ ಧ್ರುವಕು ಚುಂಬಕ ಗಾಳಿಯು ಬೀಸುತಿದೆ....ಅಂಬಿಕಾತನಯದತ್ತ

March 19, 2011

Behene de...muje behene de.....paani ki tarah..

 Art: Padmakar Kappagantula


ಎಲ್ಲವೂ ಬುಗುರಿಯಂತೆ ಗಿರಗಿರನೆ ತಿರುಗತೊದಗಿತು ಅವಳಿಗೆ ...ಸಂಭಂದಗಳು ತಟ್ಟಲೇ ಇಲ್ಲ...ಕಳಚಿಬಿದ್ದ ಕೊಂಡಿಗಳು ಎದ್ದು ಕುಣಿಯತೊದಗಿದವು.

ಬೊಗಸೆಯಲ್ಲಿ ಅಕ್ಕರತೆಯಿಂದ ತುಂಬಿಕೊಂಡ ಮೃದು ಮಧುರ ಭಾವಗಳನ್ನು ಕ್ಯೆ ಬೆರಳುಗಳ ಸಂದಿಯಿಂದ ನಿಧಾನ ಜಾರಲು ಬಿಟ್ಟಳು. ಅವೆಲ್ಲಾ ಗ್ರೆನ್ಯೇಟಿನ ತಂಪಾದ ಶಿಲೆಯ ಮೇಲೆ ಪುಟ್ಟ ಪುಟ್ಟ ಸ್ಟೀಲಿನ ಮಣಿಗಳಂತೆ ಒಂದೊಂದಾಗಿ ಜಾರಿ ಬಿದ್ದವು. ಚಲ್ಲಾಪಿಲ್ಲಿಯಾದವು... ಪುಟಿದು ಹೋದವು.. . ಆಳದಲ್ಲೆಲ್ಲೋ ಸುತ್ತಿ.. ಸುತ್ತಿ.. ಸುತ್ತಿ .. ಬಚ್ಚಿಟ್ಟ ಅವಳ ಭಯಾನಕ ಕನಸಿನ ಚೀರುವಿಕೆಯಲ್ಲಿ ಕರಗಿ ಹೋದವು.


ಪುಟ್ಟ ಹುಡುಗಿ ಅವಳು . ರಾತ್ರಿ ಕತ್ತಲಲ್ಲಿ ಬೆತ್ತಲಾಗಿ ಗಹಗಹಿಸಿ ನಕ್ಕ ಅವನು. ಅವನ ಮನಸಿನ, ದೇಹದ ಕೊಳೆತ ಮಾಂಸದ ಗೋರಿ ಹೊತ್ತು ತಿರುಗಿದಳು ಅವಳು . ಅದೆಷ್ಟು ಕಾಲವಾಯ್ತು ... ಪ್ರೀತಿ.. ಒಲವಿನ ನವಿರುಭಾವಕ್ಕೆ ಮುಳ್ಳುಬೇಲಿ ಹಾಕಿ ರಾತ್ರಿ ಹಗಲು ಕಾದಳು. ಹೊಸ ಗಾಳಿ ಬೀಸಿದರೂ ಸತ್ತ ಹೆಣದ ಕೊಳೆತ ವಾಸನೆ...

ಇಂದು ಮತ್ತೆ ನಡುಗಿದಳು . ಚಳಿಗಾಳಿ ಚರ್ಮದಡಿ ನುಗ್ಗಿ ಎಲುಬನ್ನು ತೂರಿ ಎಲುಬಿನ ನಳಿಕೆಯ ಮಾಂಸವನ್ನು ಹೀರಿ ಹೀರಿ ಎಳೆದಂತೆ ...

ಬದುಕು ಕಣ್ಣು ಬಿಡುವಾಗಲೇ ವ್ಯೆರಾಗ್ಯ ... ಪ್ರೀತಿ.. ಒಲವಿನ.. ನವಿರುಭಾವಕ್ಕೆಮುಳ್ಳು ಬೇಲಿ .. ಕನಸ ತುಂಬಾ ಕೊಳೆತ ಹೆಣದ ವಾಸನೆ ... ಬದುಕು ಪ್ರೀತಿಸಲೇ ಇಲ್ಲ .. ಪ್ರೀತಿಗೆ ಸಂಬ್ರಮಿಸಲೂ ಇಲ್ಲ .. ನವಿರು ಭಾವಗಳಿಗೆ ತಟ್ಟಲೂ ಇಲ್ಲ.. ಮುಟ್ಟಲೂ ಇಲ್ಲ ..


ಮಳೆ ಬಿದ್ದು ಹಸಿ ಮಣ್ಣಿನ ವಾಸನೆ ಮೃದುವಾಗಿ ಮೂಗು ಸವರಿ ಹೋಗಿತ್ತು. ಅಲ್ಲೊಂದು ಪ್ರೀತಿ ತಂತಾನೇ ಮೊಳೆತಿತ್ತು . ಹೂವಿನಂತ ಪ್ರೀತಿ ಅದು. ಎಲ್ಲವೂ ಒಮ್ಮೆಲೇ ಕಳಚಿ ಕೊಂಡಂತೆ... ಮೃದು ಮಧುರ ಭಾವವೊಂದು ಹರಿದು ಬಂತು... ಹೊಸ ಪ್ರೀತಿಯ ಮೆಲ್ಲನೆ ಆವರಿಸಿಕೊಂಡಳು... ಮೃದುವಾಗಿ ಅವನ ತುಟಿ ಚುಂಬಿಸಿ ಮೌನ ಬಯಸಿದಳು.. ಅವನ ಬೆಚ್ಚನೆಯ ಸ್ಪರ್ಶಕ್ಕೆ ಬಿಸಿಯಾದಳು.. ಅವನೆದೆಯಲ್ಲಿ ಮಗುವಾದಳು...

No comments:

Post a Comment