ಉತ್ತರ ಧ್ರುವದಿಂ ದಕ್ಷಿಣ ಧ್ರುವಕು ಚುಂಬಕ ಗಾಳಿಯು ಬೀಸುತಿದೆ....ಅಂಬಿಕಾತನಯದತ್ತ

October 8, 2018

Eau de toilette bottle and The acid rain



ಅಲ್ಲಿರುವ  ಕೊಳ್ಳ ದಲ್ಲಿ ಅರಳಿದ ಲಿಲ್ಲೀ  ಹೂವು ಮತ್ತು ಅದೇ ಕೊಳ್ಳ ದಲ್ಲಿರುವ ಕ್ಯಾಟ್ ಫಿಶ್ ನಡುವೆ ಪ್ರೀತಿ ಹುಟ್ಟಿತ್ತು .ಮಾತಾಡಲು ಸಿಕ್ಕಾಗಲೆಲ್ಲ ನವಿರು ಭಾವಗಳು ..ಆದರೆ ಮೇಲೆ ಬಂದು ಮಾತಾಡುವಾಗ  ಕ್ಯಾಟ್ ಫಿಶ್ ಗೆ   ಉಸಿರು ಕಟ್ಟಿದಂತಾಗಿ  ಮಿಡುಕಾಡಿತ್ತು  ..ಅದಕ್ಕಾಗಿ ಅವು ನೀರ ಗುಳ್ಳೆಗಳ ಮೂಲಕ ತಮ್ಮ ಸಂದೇಶ ಕಳಿಸಿದವು .

ಅವ ಹೇಳಿದ ....-"ನಿನ್ನ ದೇಹದ ಪರಿಮಳ ಮತ್ತು ತರಿಸುವದು "
ಅವಳು ಹೇಳಿದಳು ... "ನೀನು ಸುಂದರಾಂಗ "
ಅವ ಕೇಳಿದ..."ನಿನ್ನ ಆ ಸುಂದರ ದಳಗಳು ಅದೆಷ್ಟು ಮೃದುವಾಗಿರಬಹುದೇನೋ .."
ಅವಳು ಕೇಳಿದಳು ""ನಿನ್ನ ಮೀಸೆ ಕಚಕುಳಿ ಇಡುವದೇ?"

ಸುಂದರ ಯುವತಿಯೊಬ್ಬಳು ಅದೇ ಕಾಡಿನ  ಹಾದಿಯಲ್ಲಿ ಹಾದು ಹೋದಳು .   ಹೋಗುವಾಗ ಕೊಳ್ಳದಲ್ಲಿರುವ ಲಿಲ್ಲಿಹೂ ವಿನ ಸುಗಂಧಕ್ಕೆ ಮಾರು ಹೋಗಿ ಕೊಯ್ದು ಕೊಂಡೆ ಹೋದಳು  ...
ಹೇಳದೆ ಇರುವ ಮಾತುಗಳು.. ಪ್ರಶ್ನೆಗಳು ಇನ್ನು ಉಳಿದಿತ್ತು
ಆ ಯುವತಿ ತನ್ನ  ಇನಿಯನ ಬಳಿ ಆ ಹೂವಿನ  ಅತ್ತರು ಮಾಡಿ ಕೊಡೆಂದಳು .ಅವಳ ಇನಿಯ  ಅವಳಿಗಾಗಿ ಆ ಲಿಲ್ಲೀ ಹೂ ವಿನಿಂದ ಅತ್ತರು ಮಾಡಿ ಬಾಟಲಿಯಲ್ಲಿ ತುಂಬಿ ಕೊಟ್ಟ ..

ಇತ್ತ ಕ್ಯಾಟ್ ಫಿಶ್ ನ್ನು ಮೀನುಗಾರನೊಬ್ಬ ತನ್ನ ಬಲೆಯಲ್ಲಿ ಹಿಡಿದು ಕೊಂಡೊಯ್ದ
ಹೇಳದೆ ಇರುವ ಮಾತುಗಳು.. ಪ್ರಶ್ನೆಗಳು ಇನ್ನು ಉಳಿದಿತ್ತು 

ಮೀನುಗಾರನ ಮನೆಯವರು ಕ್ಯಾಟ್ ಫಿಶ್ ನ್ನು ಹುರಿದು ತಿಂದು ಮುಳ್ಳುಗಳನ್ನೆಲ್ಲ ಮಣ್ಣಿಗೆ ಹಾಕಿದರು.

ಹಾಗೆ ಸಹಸ್ರ ವರ್ಷಗಳು ಕಳೆದು ಹೋದವು
ಕ್ಯಾಟ್  ಫಿಶ್ ನ  ಅವಶೇಷ  ಮಣ್ಣಿನಲ್ಲಿ ಕೊಳೆತು ಇಂಧನವಾಗಿ ಪರಿವರ್ತನೆ ಯಾಗಿತ್ತು

ಈ ಇಂದನವನ್ನು ಸುಟ್ಟಾಗ ಕ್ಯಾಟ್  ಫಿಶ್ ನ ಪಳಿಯುಳಿಕೆ ಉರಿದು ಉಗಿಯಾಗಿ ಗಂಧಕವಾಗಿ ಆಕಾಶ  ತಲುಪಿತ್ತು . ಉಗಿಯನ್ನು ಗಾಳಿ  ದೂಡಿಕೊಂಡು ಅದೇ ಕಾಡಿಗೆ  ಅದೇ ಕೊಳವಿದ್ದ ಜಾಗಕ್ಕೆ  ಹೊತ್ತು ತಂದಿತ್ತು ಕ್ಯಾಟ್  ಫಿಶ್ ನ ಅವಶೇಷ  ಗಂಧಕದ ಮಳೆಯಾಗಿ ಸುರಿಯಲು ತಯಾರಿ ನಡೆಸಿತ್ತು

ಖಾಲಿಯಾದ ಅತ್ತರಿನ ಬಾಟಲಿನ ಮೂಲೆಯಲ್ಲಿ ಅವಶೇಷವಾಗಿದ್ದ ಲಿಲ್ಲೀಹೂವು  ಬಿಸ್ಸಾಕಿದ ಬಾಟ್ಲಿಯಲ್ಲಿ ಮದುರ  ಭಾವ  ಹಿಡಿದು ಕೂತಿತ್ತು ..ತಿಪ್ಪೆಯಲ್ಲಿ ,ನಾಲಿಯಲ್ಲಿ ಸಾಗಿ ಬಂದು ಬಿದ್ದಿದ್ದು
ಅದೇ ಕಾಡಿನ ಒಮ್ಮೆ ಕೊಳ್ಳ ವಿದ್ದ ಜಾಗದಲ್ಲಿ

ಅವ್ಳಿಗೆ ತವಕ ..ಅವ  ಈಗಲೂ ನನ್ನ ಮೃದು ದಳವನ್ನು ನೆನಿಸಿಕೊಂಡಿರುವನೇ ?

ಅವ  ಹೇಳಿದ ,,"ನಾನೀಗ ನಾನಾಗಿಯೇ ಉಳಿದಿಲ್ಲ ..ನನ್ನ ಒಂದು ಹನಿ ನಿನ್ನ ಮೃದು ಮಧುರ ದಳವನ್ನು ಸುಟ್ಟು  ಹಾಕುವ ಭಯ  "

ಅವಳು ಹೇಳಿದಳು "ನಾನೂ  ನಾನಾಗಿ ಉಳಿದಿಲ್ಲ ,, ಒಡೆದು   ಚೂರಾಗಿರುವೆ .."

ಒಮ್ಮೆ ಕೊಳವಾಗಿದ್ದ ಆ ಭೂಮಿ ಒಣಗಿ ಬರಡಾಗಿತ್ತು   ಬಾಟಲಿಯೊಳಗೆ ಅತ್ತರಿನ ಅವಶೇಷವಾಗಿರುವ ಲಿಲ್ಲೀ ಹೂವು   ಕೊಳದ ಹೃದಯ  ಭಾಗದಲ್ಲಿ ಹೂತು ಆಗಸಕ್ಕೆ ಎದೆ ಬಿಚ್ಚಿ ನಿಂತಿತ್ತು..ಧಾರಾಕಾರವಾಗಿ ಮಳೆ ಸುರಿದಿತ್ತು  ಮಳೆಯ ಒಂದೊಂದು  ಹ ನಿಯನ್ನು ಬಿಡದೆ ತನ್ನೊಳಗೆ ತುಂಬಿ ಕೊಳ್ಳತೊಡಗಿತ್ತು .ಬಾಟಲಿ ತುಂಬಿ ತುಳುಕುವವರಿಗೂ ಮಳೆಯಹನಿ ಹನಿ ಯನ್ನು ಆಲಂಗಿಸಿತ್ತು


ಈಗ ನಾನು ನಿನ್ನನ್ನು "ನನಗಾಗಿ ಕಾಯುವೆಯಾ /"ಎಂದು ಕೇಳಿದಾಗೆಲ್ಲ ಇಲ್ಲಿ ಮಳೆ ಸ್ವಲ್ಪ ಜೋರಾಗೆ ಸುರಿಯುವದು


ಅನುವಾದ

1 comment:

Unknown said...

Hey there supta-supta information or the article which u had posted was simply superb and to say one thing that this was one of the best information which I had seen so far, thanks for the information #BGLAMHAIRSTUDIO

Post a Comment