ಉತ್ತರ ಧ್ರುವದಿಂ ದಕ್ಷಿಣ ಧ್ರುವಕು ಚುಂಬಕ ಗಾಳಿಯು ಬೀಸುತಿದೆ....ಅಂಬಿಕಾತನಯದತ್ತ

June 23, 2013

ನೀನು ..ನಾನು.. ಮತ್ತು ಕಾಡು ಹುಲಿ



ಕಾಡು ಹುಲಿ ನನ್ನ ದೇಹದ ಪಂಜರದೊಳಗೆ 
ಸಾಧುವಾಗಿ ಕುಳಿತಿತ್ತು 
ನಿನ್ನ ಬೆವೆತ ಬೆವರಿನ ಸ್ನಾನ 
ನಿನ್ನ ಉಕ್ಕುವ ಸಿಹಿ ನಗೆಯ ಕುಡಿದು 
ನಿನ್ನ ಪಿಸು ಮಾತಿನ ಬಲೆಯ ಹರಿದು 
ನಿನ್ನ ಬಿಸಿಉಸಿರ ಅಲೆಗಳ ಏರಿ 
ನನ್ನ ಮೃದು ಚರ್ಮ, ಮೂಳೆ .. ಹಸಿ ಮಾಂಸ .. 
ಡವಗುಡುವ ಹೃದಯ .. 
ಹರಿದು ತಿಂದಿತ್ತು 
ತನುವ ಹರಿದು 
ಮನವ ಜೀವಂತ ಉಗುಳಿತ್ತು 

No comments:

Post a Comment