ಉತ್ತರ ಧ್ರುವದಿಂ ದಕ್ಷಿಣ ಧ್ರುವಕು ಚುಂಬಕ ಗಾಳಿಯು ಬೀಸುತಿದೆ....ಅಂಬಿಕಾತನಯದತ್ತ

January 31, 2011

ಬೆತ್ತಲಾಗುವ ಮನಸು....


ಹಾಲು ಉಕ್ಕಿ ಉಕ್ಕಿ ಹರಿದು
ದಟ್ಟ ಬಣ್ಣ ....ಕಂದು  ಬಣ್ಣ....  ಕರಕಲಾಗಿತ್ತು ...
ಎಲ್ಲಿ ಜಾರಿತ್ತೋ ಮನಸು  .......
ಎದೆಯಂಗಳದ ಕತ್ತಲಲ್ಲಿ
ಬೆಳದಿಂಗಳು ಹಾಲು ಚೆಲ್ಲಿ ಹೋಗಿತ್ತು ..
ಬರೆದು  ಹಳಸಿದ್ದು  ...ಹೊಟ್ಟೆ ತೊಳಸಿದ್ದು..
ಸದ್ದಿಲ್ಲದೇ ಮನಸು .ಹೊಸತೊ೦ದು ಪುಟ ತೆರೆದು ಕುಳಿತಿತ್ತು
ತಂಗಳನ್ನಕ್ಕೆ ಒಗ್ಗರಣೆ....!!!
ಘಾಟು ಹಾರಿಹೋಗುವ ಮುನ್ನ ಬಡಿಸುವ ಮನಸು 
ಒದ್ದು ಹೇಳಲು  ನೀ  ಬರದ೦ತೆ
ಬಾಗಿಲು ಗಟ್ಟಿ ...
ಚಿಲಕ ಗಾಳಿಗೆ ಅಲುಗಾಡಿದರು  ನಡುಗುವ ಮನಸು ... .
ಕತ್ತಲಲ್ಲಿ  ಕರಗುವ ಮುನ್ನ ಬೆತ್ತಲಾಗುವ ಮನಸು....
ಕಣ್ಣಾಮುಚ್ಚಾಲೆ ಆಟಕ್ಕೆ  ಅಣಿಯಾಗಿತ್ತು

No comments:

Post a Comment