ಉತ್ತರ ಧ್ರುವದಿಂ ದಕ್ಷಿಣ ಧ್ರುವಕು ಚುಂಬಕ ಗಾಳಿಯು ಬೀಸುತಿದೆ....ಅಂಬಿಕಾತನಯದತ್ತ

February 4, 2011

ಒಲವು ಕವಿತೆಯಾಗುವದೆ ಇಲ್ಲ ...

ಒಲವು ಕವಿತೆಯಾಗುವದೆ ಇಲ್ಲ
ಗರಬಡಿದು ಬೆರಗಾಗುವದು...

ಧಗಧಗಿಸುವ ಕನಸುಗಳಿಗೆ
ಕತೆ ಹೇಳಿ ತಟ್ಟಿ ಮಲಗಿಸುವೆ..

ಬೆಳಗೆದ್ದು ಸೂರ್ಯ ನಗುವ..
ಹೂವ ತೇರನೇರಿ ಬರುವದು
ಮತ್ತೆ ಒಲವು..

ಎದೆಯಂಗಳದ ಬೆಳದಿಂಗಳಲ್ಲಿ
ಪ್ರೇಮ ಗರಿಯನು ಅದ್ದಿ
ಮತ್ತೆ ಗೀಚುವೆ   ಕವಿತೆಯ
ಒಲವ ಬೇಡುತ...

ಕಾತರದ ಕಟ್ಟೆ ಏರಿ ಕಾಯುವೆ...

ಸಂಗ್ರಹ 


No comments:

Post a Comment